ಪ್ರತಾಪ್ ಚಂದ್ರ ರೆಡ್ಡಿ (ಜನನ ೫ ಫೆಬ್ರವರಿ ೧೯೩೩ ಅರಗೊಂಡಾದಲ್ಲಿ ) ಒಬ್ಬ ಭಾರತೀಯ ಉದ್ಯಮಿ ಮತ್ತು ಹೃದ್ರೋಗ ತಜ್ಞರಾಗಿದ್ದರು. ಅವರು ಭಾರತದಲ್ಲಿ ಮೊದಲ ಕಾರ್ಪೊರೇಟ್ ಆಸ್ಪತ್ರೆಗಳ ಸರಪಳಿಗಳಾದ ಅಪೊಲೊ ಆಸ್ಪತ್ರೆಯನ್ನು ಸ್ಥಾಪಿಸಿದರು. ಇಂಡಿಯಾ ಟುಡೆ ತನ್ನ ೨೦೧೭ ರ ಭಾರತದ ೫೦ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರಿಗೆ ೪೮ ನೇ ಸ್ಥಾನ ನೀಡಿದೆ. == ಹಿನ್ನೆಲೆ == ರೆಡ್ಡಿ ಅವರಿಗೆ ೧೯೯೧ ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಮತ್ತು ೨೦೧೦ ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು. == ವೈಯಕ್ತಿಕ ಜೀವನ == ರೆಡ್ಡಿಯವರು ತಮ್ಮ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ: ಪ್ರೀತಾ ರೆಡ್ಡಿ ಸುನೀತಾ ರೆಡ್ಡಿ, ಪಿ. ದ್ವಾರಕಾನಾಥ್ ರೆಡ್ಡಿ ಅವರ ಪತ್ನಿ(ನಿಪ್ಪೋ ಬ್ಯಾಟರಿಸ್ ಮತ್ತು ಡೈನೋರಾ ಟಿವಿಯ ಸ್ಥಾಪಕ ಪಿ. ಅಹೋಬಲ ರೆಡ್ಡಿ ಅವರ ಮಗ) ಸಂಗೀತಾ ರೆಡ್ಡಿ ಶೋಬಾನಾ ಕಾಮಿನೇನಿ, ಅವರ ಮಗಳಾದ ಉಪಾಸನಾ ಅವರು ತೆಲುಗು ಚಿತ್ರರಂಗದ ನಟರಾದ ರಾಮ್ ಚರಣ್ ಅವರನ್ನು ವಿವಾಹವಾಗಿದ್ದಾರೆ. ರೆಡ್ಡಿ ಅವರ ಎಲ್ಲಾ ಹೆಣ್ಣುಮಕ್ಕಳು ಅಪೋಲೋ ಆಸ್ಪತ್ರೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. == ಪ್ರಶಸ್ತಿಗಳು ಮತ್ತು ಮನ್ನಣೆ == ೧೯೯೧: ಗೌರವ ಪದ್ಮಭೂಷಣ ಪ್ರಶಸ್ತಿ. ೨೦೧೦: ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ವಿಭೂಷಣ ಪ್ರಶಸ್ತಿ. ೨೦೧೮: ಅಪೋಲೋ ಹಾಸ್ಪಿಟಲ್ಸ್‌ನಿಂದ ಲಯನ್ಸ್ ಹ್ಯುಮಾನಿಟೇರಿಯನ್ ಪ್ರಶಸ್ತಿಯನ್ನು ನೀಡಲಾಯಿತು. ೨೦೨೨: ಐಎಂಎ ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. == ಉಲ್ಲೇಖಗಳು ==